Skip navigation

Monthly Archives: March 2012

ನೆಪಕ್ಕೆ  ಒಮ್ಮೆಯಾದರೂ  ನನ್ನ  ನೆನೆದು  ನಕ್ಕಿ  ಬಿಡು

ನಿನ್ನ  ನಗುವಿಗೆ  ಕಾಯುತಿರುವ  ನನ್ನನ್ನೊಮ್ಮೆ  ನೋಡಿ  ಹಾಗೇ ಹೊರಟು ಬಿಡು

ಸಾದ್ಯವಾದರೆ  ನನ್ನನ್ನೊಮ್ಮೆ  ಹಾಗೆಯೇ  ಕಣ್ಣೋಟ ದಲಿ  ಕೊಂದು  ಬಿಡು

ಮುಂದಿನ ಜನ್ಮದಲ್ಲಿಯಾದರೂ ನನಗೆಂದೆ ನಿನ್ನ ಹೃದಯವ  ಮೀಸಲಿಡು !

 

ನನ್ನೆಲ್ಲ ನೆನಪುಗಳ ಈ ಜನ್ಮದಲ್ಲಿ ಮರೆಯಬೇಡ

ಮತ್ತೆ ನೆನಪು ಬರುತಿಲ್ಲವೆಂದು ಬರುವ ಜನ್ಮದಲ್ಲೂ ಕಾಡಬೇಡ

ಮಾನವ ಜನ್ಮ ಬಲು ದೊಡ್ಡದು ಎನ್ನುವರು ಸುಳ್ಳು ಎನ್ನಬೇಡ

ನಿನಗಾಗೆ ಮತ್ತೆ ಜನ್ಮವೆತ್ತುವೆ ನೀ ಮರೆತು ಕೂಡ ಮರೆಯಬೇಡ !

 

ಬಚ್ಚಿಟ್ಟ ನನ್ನೆಲ್ಲ ಕನಸುಗಳ ನನ್ನೆದೆಯಲ್ಲಿ ಮುಚ್ಚಿಕೊಂಡು ಹೋಗುವೆ ನೀ ಕಾಯಬೇಡ

ಮತ್ತೆ ಅದನ್ನು ನಿನಗಾಗೆ ಬಿಚ್ಚಿಟ್ಟು ಕಾಯುವೆ ನನ್ನ ಕಾಯಿಸಬೇಡ

ಕನಸುಗಳ ಮತ್ತೆ ಮತ್ತೆ ಕೊಂದು ನನ್ನ ನೋಯಿಸಬೇಡ

ಬೆಟ್ಟದಷ್ಟು ಕನಸುಗಳ ಹೊತ್ತು ಕೊಂಡಿರುವೆ ನೀ ಸುಮ್ಮನೆ ಸತಾಯಿಸಬೇಡ !

 

ಯಾರೇನೆ ಅಂದರೂ ನೀ ಅದಕೆಲ್ಲ ತಲೆ ಕೆಡಿಸಿ ಕೊಳ್ಳ ಬೇಡ

ಆರಿಸಿ ಕೊಂಡ ಪ್ರೀತಿಯನು ಮರೆತು ನೀ ನೋವಿನಲಿ ಬೇಯಬೇಡ

ನಿನಗೆಂದೇ ಮತ್ತೊಂದು ಜನ್ಮವೆತ್ತಿ ಬರುವೆ ಈ ಮರೆಯಬೇಡ

ನನಗಾಗಿ ನೀ ಮತ್ತೊಮ್ಮೆ ಹುಟ್ಟಿ ಬರಲು ತಡ ಮಾಡಬೇಡ !

 

ನಿನ್ನಿಷ್ಟಕೆ ಸೋತು ನಾ ನಿನ್ನಿಂದೆ ಬರುತ್ತಿಲ್ಲ ಈ ಜನ್ಮದಲ್ಲಿ

ನೀ ಮಾತು ಕೊಟ್ಟಂತೆ ನಾ ಕಾಯಬಲ್ಲೆ ನಿನ್ನ ನೆನಪಿನಲ್ಲಿ

ಮತ್ತೆ ಮತ್ತೆ ಮಾತು ಕೇಳಿ ನನ್ನ ಕಾಡಬೇಡ ನೀ ಬರುವ ಜನ್ಮದಲ್ಲಿ

ನನಗಾಗಿಯೇ ಮತ್ತೆ ಹುಟ್ಟಿ ಬರುವೆಯ ಓ ಪುಟ್ಟ ಮಲ್ಲಿ !