Skip navigation

Monthly Archives: October 2010

ಕಾದಿದ್ದೆವು ವರುಷಗಳಿಂದ

 ಕಳೆದು ಕೊಂಡಿದ್ದೆವು ನೆಮ್ಮದಿಯ ಆ ದಿನಗಳಿಂದ

 ಎಲ್ಲರೂ ನೀರಿಕ್ಷೆಯಲಿ ಕಾದಿದ್ದರು ನೆಮ್ಮದಿ ದೊರೆಯಬಹುದೇ ಆ ತೀರ್ಪಿನಿಂದ

 ಹುಸಿಯಾಗಲಿಲ್ಲ ಜನ ಮಾನಸವದು ಸ್ವಾಗತಿಸುತಿದೆ ಒಮ್ಮತದಿಂದ !

 ಬಯಸಿರಲಿಲ್ಲ ಯಾರೂ ಕೂಡ ಅಲ್ಲಿ ಏನಾಗಬೇಕೆಂದು

 ಎಲ್ಲರಿಗೂ ಅರಿವಿದೆ ಎಲ್ಲರ ದೇವರು ಕೂಡ ಒಬ್ಬನೇ ಎಂದು

 ಕೆಸರೆರಚಿ ಬಿಟ್ಟರೂ ಪುಡಾರಿಗಳು ರಾಜಕೀಯವ ಒಳ ತಂದು

 ಕಳೆದು ಹೋಯ್ತು ಜಾತ್ಯತೀತ ದೇಶದ ನೆಮ್ಮದಿ ಅಂದು !

ನಾವು ರಾಮನ ಭಕ್ತರು ಅಂದರೆ ರಹೀಮನ ವಿರೋಧಿಗಳಲ್ಲ

 ಅವರು ರಹೀಮನ ಭಕ್ತರು ರಾಮನ ವಿರೋಧಿಗಳಲ್ಲ

ನಮಗೆ ಬೇಕಾಗಿರುವುದು ಎಲ್ಲರ ನೆಮ್ಮದಿ ಮತ್ತೇನು ಅಲ್ಲ

 ಸುಖ ಸುಮ್ಮನೆ ವರುಷಗಳಿಂದ ನಮ್ಮ ನೆಮ್ಮದಿಯ ಕೆಡಿಸಿ ಬಿಟ್ಟಿರಲ್ಲ !

ಎಲ್ಲರೂ ಒಂದಾಗಿ ಬಿಟ್ಟರೆ ನೆಮ್ಮದಿ ಕೆಡಿಸುವವರಿಗೆ ಬೇರೆ ಕೆಲಸವಿರುವುದಿಲ್ಲ

ಸುಮ್ಮನೆ ನಮ್ಮ ನಮ್ಮಲಿ ಒಡಕನು ತಂದು ಬಿಟ್ಟಿದ್ದರಲ್ಲ

ವರುಷ ವರುಷಗಳಿಂದ ಒಬ್ಬರ ಮೇಲೊಬ್ಬರು ಕತ್ತಿ ಮಸೆದು ಕಾದಿದ್ದೆವಲ್ಲ

 ಆ ಒಂದು ತೀರ್ಪು ಮತ್ತೆ ಭವ್ಯ ಭಾರತದ ಗತ ವೈಭವಕೆ ಕಾರಣ ಆಗಿ ಬಿಡಬಹುದಲ್ಲ !

ಎಲ್ಲ ಮರೆತುಬಿಡೋಣ ಮತ್ತೆ ಜಾತ್ಯತಿತೆಯನು ಮೆರೆಯೋಣ ಎಲ್ಲ ಒಂದೇ ಎಂದು ಶಾಂತಿ ಸೌಹರ್ದತೆಯನು ಮೆರೆಸೋಣ ಕಟ್ಟೋಣ ಮತ್ತೆ ಹಿಂದೆಂದಿಗಿಂತಲೂ ಶಕ್ತಿ ಶಾಲಿಯಾಗಿ ಭಾರತವನ್ನ ಅದರ ಕೀರ್ತಿ ಪತಾಕೆಯನು ವಿಶ್ವದೆಲ್ಲೆಡೆ ಹಾರಿಸೋಣ ಕಟ್ಟೋಣ ಹೊಸತು ನಾಡೊಂದನು ರಸದ ಬೀಡೊಂದನು !